Chaitanya Consultancy

Friday, July 19, 2013

ಗೂಗ್ಲಿ ಚಿತ್ರ ವಿಮರ್ಶೆ




ಮಾತು ಮಾತಿನಲ್ಲೂ ಗೂಗ್ಲಿ ಎಸೆತ, ಸೆಂಚುರಿ ಖಚಿತ

        ರ್‍ಯಾಂಕ್ ಸ್ಟೂಡೆಂಟ್ ಆದರೂ ತುಂಬಾ ತರ್‍ಲೆ. ಹುಡುಗೀರೆಂದರೆ ಮಾರುದ್ದ ದೂರ ನಿಲ್ಲೋ ಹುಡುಗ ಅಚಾನಕ್ಕಾಗಿ ಲವ್ವಲ್ಲಿ ಬಿದ್ದು ಒದ್ದಾಡಿ, ಬದುಕಲ್ಲಿ, ಲವ್ವಲ್ಲಿ ಮೇಲೆದ್ದು ಬರುವ ಕಥೆಯನ್ನು ಪವನ್ ಒಡೆಯರ್ ಇಂಟರೆಸ್ಟಿಂಗ್ ಆಗಿ, ಕ್ಯಾಚಿ ಡೈಲಾಗ್‌ಗಳಿಂದ, ಗೂಗ್ಲಿಯಂಥ ಮಾತಿನ ಎಸೆತಗಳಿಂದ, ಬೌಂಡರಿ ಬಾರಿಸುವಂಥ ಹಾಡುಗಳಿಂದ, ಸಿಕ್ಸರ್ ಹೊಡೆಯುವಂಥ ಫೈಟ್‌ಗಳಿಂದ ಎರಡೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ.
      ಪ್ಯಾರ್‌ಗೆ ಆಗ್ ಬುಟೈತೆ ಹಾಡಿನಿಂದಲೇ ಸದ್ದುಮಾಡಿದ್ದ ಗೋವಿಂದಾಯನಮಃ ಸಿನಿಮಾ ಕಥೆಯ ನಿರೂಪಣೆಯೂ ಗೆದ್ದಿತ್ತು. ಆ ಮೂಲಕ ಪವನ್ ಒಡೆಯರ್ ಭರವಸೆ ಮೂಡಿಸಿದ್ದರು. ಲೋ ಬಜೆಟ್ ಆಗಿದ್ದರೂ ಸಿನಿಮಾ ಸೂಪರ್‌ಹಿಟ್ ಆಗಿತ್ತು. ಈಗ ಪವನ್ ಒಡೆಯರ್ ಬಿಗ್ ಬಜೆಟ್ ಸಿನಿಮಾವನ್ನು ತುಂಬಾ ರಿಚ್ ಆಗಿ,   ಸ್ಟೈಲಿಶ್ ಆಗಿ ತೆರೆಗೆ ತಂದು ಜನರಿಗೆ ರೀಚ್ ಆಗಿದ್ದಾರೆ.
       ಅನಾಥ ಯುವತಿಗೆ ಡಾಕ್ಟರ್ ಆಗುವ ಕನಸು. ಗೊತ್ತು ಗುರಿ ಇಲ್ಲದ ಆತನಿಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಯೋಚನೆ-ಯೋಜನೆ ಇದ್ದರೂ ಮಹಾನ್ ಕಿರಾತಕ. ಕಾಲೇಜಿನ ಪ್ರಿನ್ಸಿಯನ್ನೇ ಬಿಡದ ಶರತ್ ಹುಡುಗೀರನ್ನ ಬಿಡ್ತಾನಾ? ಅದಕ್ಕೆ ಕಾಲೇಜಿನಲ್ಲಿ ಯಾರೂ ಆತನ ತಂಟೆಗೆ ಹೋಗಲ್ಲ, ಮಾತನಾಡಿಸಲ್ಲ. ಇವನು ಅಷ್ಟೇ. ಯಾರೂ ತಂಟೆಗೆ ಹೋಗಲ್ಲ ಆದರೆ ಯಾರಾದರೂ ಹುಡುಗಿರನ್ನ ಚುಡಾಯಿಸಿದರೆ ಗುನ್ನಾ ಗ್ಯಾರಂಟಿ.
        ಆದರೂ ಶರತ್ ರ್‍ಯಾಂಕ್ ಸ್ಟೂಡೆಂಟ್. ಶರತ್‌ನ ಮಾತಿನ ಮೋಡಿಗೆ, ಜಾಣತನಕ್ಕೆ ಸ್ವಾತಿ ಫೀದಾ. ಸ್ವಾತಿಯ ನಗು, ಮುಂಗುರುಳು, ಕೇರ್‌ನೆಸ್‌ನಿಂದಾಗಿ ಲವ್ ಎಂದರೆ ಮೂಗು ಮುರಿಯುವ ಶರತ್ ಸ್ವಾತಿಗೆ ಮನಸು ಕೊಡುತ್ತಾನೆ. ಆದರೆ ಇಬ್ಬರಿಗೂ ಇಷ್ಟವಿದ್ದರೂ ಫಸ್ಟ್ ಪ್ರಪೋಸ್‌ಗಾಗಿ ಕಾಯುವಾಟ. ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಸ್ವಾತಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿರುತ್ತಾಳೆ. ಅಲ್ಲಿ ಸಹಪಾಠಿಯೊಬ್ಬ ಆಕೆಯನ್ನು ಉಪಚರಿಸುತ್ತಿದ್ದಾನೆ. ಇದನ್ನ ಕಂಡ ಶರತ್ ರಂಪಾಟ ಅಷ್ಟೇ ಅಲ್ಲ ಲವ್‌ನ್ನೇ ಕಟ್ ಮಾಡಿ ಹೊರಟು ಬಿಡುತ್ತಾನೆ.
       ಎಷ್ಟೇ ಆದರೂ ಫಸ್ಟ್ ಲವ್ ಅಲ್ವಾ ಮರೆಯೋಕೆ ಆಗಲ್ಲ. ಘಟನೆ ನಡೆದು ಎರಡು ವರ್ಷಗಳೇ ಉರುಳಿ, ಶರತ್ ದೇಶದ ಮಹಾನ್ ವಾಣಿಜ್ಯೋದ್ಯಮಿಯಾದರೂ ಸ್ವಾತಿಯ ಪ್ರೀತಿಯ ಸೆಳೆತ ಇದ್ದೇ ಇರುತ್ತೆ. ಸ್ವಾತಿಯ ಜನುಮ ದಿನದಂದು ಫೊನ್‌ನಲ್ಲಿ ಪ್ರಪೋಸ್ ಮಾಡಿದರೂ ಆಕೆ ಪ್ರೀತಿ ನಿರಾಕರಿಸುತ್ತಾಳೆ. ಅಲ್ಲಿಗೆ ಭಗ್ನಪ್ರೇಮಿಯಂಥಾದ ಶರತ್ ವಿದೇಶದಿಂದ ಮರಳಿ ಭಾರತಕ್ಕೆ ಬಂದು ಹೆತ್ತವರ ಅಣತಿಯಂತೆ ಮದುವೆಯಾಗಲು ಸಿದ್ಧನಾಗುತ್ತಾನೆ.
         ಆಕಸ್ಮಿಕವಾಗಿ ಮತ್ತೇ ಶರತ್‌ಗೆ ಕಾಣುವ ಸ್ವಾತಿ ಮತ್ತೇ ಆತನಿಗೆ ಸಿಗ್ತಾಳಾ. ಇಬ್ಬರೂ ಹೇಗೆ ಭೇಟಿಯಾಗ್ತಾರೆ. ಒಂದಾಗ್ತಾರಾ ಎನ್ನುವುದನ್ನು ತುಂಬಾ ನೀಟಾಗಿ ಪವನ್ ಒಡೆಯರ್ ಹೇಳಿದ್ದಾರೆ. ಆದರೆ ಇಬ್ಬರ ಮುನಿಸಿಗೆ ಅಂಥ ಗಾಢವಾದ ಕಾರಣ ಎಲ್ಲೂ ಕಾಣಲ್ಲ. ಅದರ ಬಗ್ಗೆ ಪವನ್ ಕೊಂಚ ವರ್ಕ್‌ಔಟ್ ಮಾಡಬೇಕಿತ್ತು ಎನಿಸುತ್ತದೆ. ಇದೊಂದನ್ನ ಬಿಟ್ಟರೆ ಪವನ್ ಮತ್ತೆಲ್ಲೂ ಸೋತಿಲ್ಲ.
         ಸ್ಟೈಲಿಶ್ ಹುಡುಗನಾಗಿ, ಬಿಸಿನೆಸ್‌ಮ್ಯಾನ್ ಆಗಿ, ತರ್‍ಲೆಯಾಗಿ, ವಿರಹಪ್ರೇಮಿಯಾಗಿ ಯಶ್ ಇಷ್ಟವಾಗುತ್ತಾರೆ. ಡ್ಯಾನ್ಸನಲ್ಲಿ, ಫೈಟ್‌ನಲ್ಲೂ ಯಶ್ ರಾಕಿಂಗ್ ಸ್ಟಾರ್. ನವಿರಾಗಿರುವ ಪ್ರೇಮಕಥೆಯಾಗಿದ್ದರೆ ಬಹುಶಃ ಗೂಗ್ಲಿ ಬೋರ್ ಆಗುತ್ತಿತ್ತು. ಮೊನಚಾದ ಡೈಲಾಗ್‌ಗಳಿಂದ ಹುಡುಗಿಯರನ್ನ ಬತಾ ಪಡ್ಡೆಗಳ ಮನಸು ಗೆಲ್ಲುವ ಮಾತುಗಳೇ ಚಿತ್ರದ ನಿಜವಾದ ಜೀವಾಳ. ಪವನ್ ಒಡೆಯರ್ ಚಿತ್ರಕಥೆ, ಸಂಭಾಷಣೆಯಲ್ಲಿ ಕೈ ಚಳಕ ತೋರಿಸಿದ್ದಾರೆ. ಕೃತಿ ಕರಬಂಧ ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ. ಸಾಧುಕೋಕಿಲಾ ಓ ಮಲ್ಲಿಗೆಯ ಫೋಟೋಗ್ರಾಫರ್ ಮುಸ್ತಫಾ ಆಗಿ ಕೆಲವೇ ಹೊತ್ತಿದ್ದರೂ ನೆನಪಲ್ಲುಳಿಯುತ್ತಾರೆ. ಅನಂತ್‌ನಾಗ್ ಅಪ್ಪನಾಗಿ ಮತ್ತೊಮ್ಮೆ ಗೆದ್ದಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಜಯಣ್ಣ ಹಾಗೂ ಭೋಗೆಂದ್ರ ಸಿನಿಮಾದ ಅದ್ಧೂರಿಗೆ ಬೇಕಾದ್ದನ್ನೆಲ್ಲ ಕೊಟ್ಟಿರುವುದು ಎದ್ದು ಕಾಣುತ್ತದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಂಥ ಪ್ರತಿಕ್ರಿಯೆ ಕೊಟ್ಟಿರುವುದನ್ನು ಗಮನಿಸಿದರೆ ಬಂಡವಾಳ ವಾಪಸ್ ಬರುವುದಂತೂ ಖಚಿತ. ಗೂಗ್ಲಿಗೆ ಶತಕ ಬಾರಿಸುವ ಎಲ್ಲ ಲಕ್ಷಣಗಳು ಇವೆ. ನೋಡಣ ಏನಾಗತ್ತೆ.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಶಾರದಾ ಚಿತ್ರಮಂದಿರ, ಕೊಪ್ಪಳ.
-----------------------------------------------





ಏರ್‌ಮನ್ ಭರ್ತಿ ರ್‍ಯಾಲಿ : ಸಮರ್ಪಕ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

ಕೊಪ್ಪಳದಲ್ಲಿ ಜು. ೩೧ ರಿಂದ ಏರ್‌ಮನ್ ಭರ್ತಿ ರ್‍ಯಾಲಿ : 


 ಭಾರತೀಯ ವಾಯುಪಡೆಯಲ್ಲಿನ ಗ್ರೂಪ್'ಎಕ್ಸ್' ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜು. ೩೧ ರಿಂದ ನೇಮಕಾತಿ ರ್‍ಯಾಲಿ ನಡೆಯಲಿದ್ದು, ನೇಮಕಾತಿ ರ್‍ಯಾಲಿ ಸಮರ್ಪಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಏರ್‌ಮನ್ ನೇಮಕಾತಿ ರ್‍ಯಾಲಿ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ ಹುದ್ದೆಗಳಿಗೆ ಕೊಪ್ಪಳದಲ್ಲಿ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಈ ರ್‍ಯಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದೆ.  ಆದ್ದರಿಂದ ಸುಮಾರು ೧೫೦೦ ರಿಂದ ೨೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕಾಗಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು.  ಜು. ೩೧ ರಂದು ಎಲ್ಲ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಮಾತ್ರ ಆಗಸ್ಟ್ ೦೧ ರಂದು ವೈದ್ಯಕೀಯ ಮತ್ತು ದೈಹಿಕ ಅರ್ಹತೆ ಪರೀಕ್ಷೆ ನಡೆಯಲಿದೆ.  ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್ ನಿರ್ಮಾಣ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು.  ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಕ್ರೀಡಾಂಗಣದ ಟ್ರ್ಯಾಕ್ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.  ತುರ್ತು ನಿರ್ವಹಣೆಗಾಗಿ ಆಂಬುಲೆನ್ಸ್ ಹಾಗೂ ತಜ್ಞ ವೈದ್ಯರು ನೇಮಕಾತಿ ರ್‍ಯಾಲಿ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಎಂ. ಬಿಜುಕುಮಾರ್ ಅವರು ಮಾತನಾಡಿ, ಏರ್‌ಮನ್ ನೇಮಕಾತಿ ರ್‍ಯಾಲಿಯನ್ನು ಮುಕ್ತ ಹಾಗೂ ಪಾರದರ್ಶಕತೆಯಿಂದ ನಡೆಸಲಾಗುವುದು.  ಅಭ್ಯರ್ಥಿಗಳು ಯಾವುದೇ ಮದ್ಯವರ್ತಿಗಳ ಆಮಿಷಕ್ಕೆ ಒಳಗಾಗದೆ ತಮ್ಮ ಸ್ವ ಸಾಮರ್ಥ್ಯದಿಂದ ಆಯ್ಕೆ ಆಗಬಹುದಾಗಿದೆ.  ಲಿಖಿತ ಪರೀಕ್ಷೆಯು ಸಿಬಿಎಸ್‌ಸಿ ವಿಷಯಾಧಾರಿತವಾಗಿ ನಡೆಯಲಿದ್ದು, ಗಣಿತ ಮತ್ತು ವಿಜ್ಞಾನ ವಿಷಯಗಳ ಹೆಚ್ಚಿನ ಪ್ರಶ್ನೆಗಳಿರುತ್ತವೆ.  ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಮೂರು ವರ್ಷಗಳ ಡಿಪ್ಲೋಮಾದಲ್ಲಿ ಶೇ. ೫೦ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ಶೈಕ್ಷಣಿಕ ವಿದ್ಯಾರ್ಹತೆಯ ಎಲ್ಲ ಮೂಲ ಅಂಕಪಟ್ಟಿಗಳು ಮತ್ತು ಮೂರು ಸೆಟ್ ಜೆರಾಕ್ಸ್ ಪ್ರತಿಗಳು ಅಲ್ಲದೆ ಇತ್ತೀಚಿನ ೭ ಪಾಸ್‌ಪೋರ್ಟ್ ಅಳತೆಯ ಕಲರ್ ಫೋಟೋಗಳೊಂದಿಗೆ ರ್‍ಯಾಲಿಗೆ ಹಾಜರಾಗಬೇಕು ಎಂದರು.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ವಾಯುಪಡೆ ನೇಮಕಾತಿ ರ್‍ಯಾಲಿಯನ್ನು ಅಚ್ಚುಕಟ್ಟಾಗಿ ಜರುಗಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.  ಕೊಪ್ಪಳ ಜಿಲ್ಲೆಯ ಯುವ ಅಭ್ಯರ್ಥಿಗಳಿಗೆ ಈ ನೇಮಕಾತಿ ರ್‍ಯಾಲಿಯು ಒಂದು ಸುವರ್ಣ ಅವಕಾಶವನ್ನು ಒದಗಿಸಿದ್ದು, ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು ಎಂದು ಕರೆ ನೀಡಿದರು.
  ಸಭೆಯಲ್ಲಿ ಬಾಗಲಕೋಟೆಯ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತುಕ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Thursday, July 18, 2013

ಜಿಲ್ಲಾ ಮಟ್ಟದ ಲೇಖಕರ ಸಮಾವೇಶ


ಕೊಪ್ಪಳ ೧೬ : ಸ್ಥಳೀಯ "ಚಿರಗು ಪ್ರಕಾಶನ"ವು ಬರುವ ಅಗಷ್ಟ್ (೨೦೧೩) ಮೊದಲ ವಾರದಲ್ಲಿ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಲೇಖಕರ/ಹವ್ಯಾಸಿ ಲೇಖಕರ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದು.  ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ತಮ್ಮ ಸ್ವ ವಿವರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಲೇಖಕರು ಕೃತಿ ಪ್ರಕಟಿಸಿದ ಸಂದರ್ಭದಲ್ಲಿ ಸಮಾವೇಶದಲ್ಲಿ ಪ್ರದರ್ಶಿಸುವ ಸಲುವಾಗಿ ಒಂದೊಂದು ಕೃತಿಯನ್ನು ಇದೇ ತಿಂಗಳ ೩೦ನೇ ತಾರೀಖಿನೊಳಗೆ ಕಳುಹಿಸಿಕೊಡಲು ಪ್ರಕಾಶನವು ಪ್ರಕಟಣೆ ಮೂಲಕ ಕೋರಿದೆ.
ಹೆಚ್ಚಿನ ವಿವರಗಳಿಗೆ.
ಡಿ.ಎಂ.ಬಡಿಗೇರ ಉಪನ್ಯಾಸಕರು ಬನಶಂಕರಿ ನಿಲಯ ರಾಘವೇಂದ್ರ ಮೇಟಲ್ ಸ್ಟೊರ್ ಹಿಂದುಗಡೆ ಸಿಂಪಿ ಲಿಂಗಣ್ಣ ರಸ್ತೆ ಕೊಪ್ಪಳ. ಮೊ: ೯೯೬೪೩೨೮೬೭೭, ೭೪೧೧೨೮೫೬೭೭

ಕೊಪ್ಪಳದಲ್ಲಿ ಜು. ೩೧ ರಂದು ವಾಯುಪಡೆ ನೇಮಕಾತಿ ರ್‍ಯಾಲಿ

  ಭಾರತೀಯ ವಾಯುಪಡೆಯು ಗ್ರೂಪ್ "ಎಕ್ಸ್" ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ರ್‍ಯಾಲಿಯನ್ನು ಜುಲೈ ೩೧ ರಂದು ಕೊಪ್ಪಳದ  ಜಿಲ್ಲಾ ಕ್ರೀಡಾಂಗಣದಲ್ಲಿ (ಬ್ಯಾಡ್ಮಿಂಟನ್ ಕೋರ್ಟ್)ದಲ್ಲಿ ಆಯೋಜಿಸಲಾಗಿದೆ. 
 ೧ನೇ ಮೇ ೧೯೯೩ ರಿಂದ ೩೦ನೇ ನವೆಂಬರ್ ೧೯೯೬ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗವಹಿಸಬಹುದು. ದ್ವಿತೀಯ ಪಿಯುಸಿ ಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಪ್ರತ್ಯೇಕವಾಗಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೋಮಾ (ಮೆಕ್ಯಾನಿಕಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಸೈನ್ಸ್, ಇನ್ಸಟ್ರುಮೆಂಟೇಷನ್ ಟೆಕ್ನಾಲಾಜಿ, ಇನ್‌ಫಾರ್ಮೇಷನ್ ಟೆಕ್ನಾಲಾಜಿ) ರಲ್ಲಿ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು ಹಾಗೂ ಡಿಪ್ಲೋಮಾ ಅಥವಾ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿಯುಸಿ ಯಲ್ಲಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಹ ಅಭ್ಯರ್ಥಿಗಳು ಎಲ್ಲ ಮೂಲ ಅಂಕಪಟ್ಟಿಗಳೊಂದಿಗೆ (ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ) ಮತ್ತು ಅವುಗಳ ಮೂರು ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ ಇತ್ತೀಚಿನ ೭ ಪಾಸ್‌ಪೋರ್ಟ ಅಳತೆಯ ಭಾವಚಿತ್ರ (ಕಲರ್) ಗಳೊಂದಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ ಹಾಜರಾಗಬೇಕು.
 ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್‌ಸೈಟ್ www.indianairforce.nic.in  ಅಥವಾ ಇ-ಮೇಲ್  co7asc@dataone.in  ಅಥವಾ ದೂರವಾಣಿ ಸಂಖ್ಯೆ ೦೮೦-೨೫೫೯೨೧೯೯ ಅಥವಾ ಖುದ್ದಾಗಿ ನಂ.೭, ಏರ್‌ಮೆನ್ ಸೆಲೆಕ್ಷನ್ ಸೆಂಟರ್ ನಂ.೧, ಕಬ್ಬನ್ ರಸ್ತೆ, ಬೆಂಗಳೂರು-೫೬೦ ೦೦೧ರಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ .

ಸಹಕಾರ ಸಂಘಗಳ ಚುನಾವಣೆ : ಜು. ೨೦ ರಂದು ಕಾರ್ಯಾಗಾರ

: ಕೊಪ್ಪಳ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸುವ ಸಂಬಂಧ ಚುನಾವಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜು. ೨೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
  ಜಿಲ್ಲೆಯಲ್ಲಿನ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ಜರುಗಿಸಲು ರಾಜ್ಯ ಸಹಕಾರ ಚುನಾವಣಾ ಆಯೋಗ ಈಗಾಗಲೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ.  ಚುನಾವಣೆಯನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳನ್ವಯ ಜರುಗಿಸಲು ಚುನಾವಣಾಧಿಕಾರಿಗಳಿಗೆ ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಚುನಾವಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತರಬೇತಿಗೆ ತಪ್ಪದೆ ಹಾಜರಾಗಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ  ತಿಳಿಸಿದ್ದಾರೆ.

ಸಹಕಾರ ಸಂಘಗಳ ಅಧಿನಿಯಮಕ್ಕೆ ತಿದ್ದುಪಡಿ : ಜು. ೨೪ ರಂದು ತರಬೇತಿ ಕಾರ್ಯಾಗಾರ
ಕೊಪ್ಪಳ ಜು.   ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ ಕ್ಕೆ ಭಾರತದ ಸಂವಿಧಾನದ ೯೭ನೇ ತಿದ್ದುಪಡಿಯನ್ನು ತರಲಾಗಿದ್ದು, ತಿದ್ದುಪಡಿಯಾದ ಅಂಶಗಳನ್ನು ಸಹಕಾರ ಸಂಘಗಳ ಉಪ ನಿಯಮಗಳಿಗೆ ಅಳವಡಿಸಿಕೊಳ್ಳುವ ಕುರಿತು ವಿಷಯ ತಜ್ಞರಿಂದ ತರಬೇತಿ ಕಾರ್ಯಾಗಾರವನ್ನು ಜು. ೨೪ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.  
  ಜಿಲ್ಲೆಯ ಎಲ್ಲ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರಿ ಈ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ   ತಿಳಿಸಿದ್ದಾರೆ.

chaitanya consultancy


post 1


featured next


featured prev


featured pager


menu


wraper big


search


wrapper


tags


comment


aaa


date


search


sidebar


footer


post holder


header


body


Monday, July 8, 2013

ಜು.೧೧ ರಂದು ವಿಶ್ವ ಜನಸಂಖ್ಯಾ ದಿನಾಚರಣೆ

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಸರ್ವೋದಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು.೧೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯದಡಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮ ಜರುಗಲಿದೆ. 
 ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸಲಿದ್ದಾರೆ. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.  ಮುಖ್ಯ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಜಿ.ಪಂ. ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶಪ್ಪ ಕಂತೆಪ್ಪ ಕುಳಗಿ, ತಾ.ಪಂ. ಅಧ್ಯಕ್ಷ ದೇವಣ್ಣ ಭರಮಪ್ಪ ಮೇಕಾಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕಡಪಟ್ಟಿ, ರೋಟರಿ ಕ್ಲಬ್‌ನ ಮಾಜಿ ಗವರ್ನರ್ ಕೆ.ಜಿ.ಕುಲಕರ್ಣಿ ಅವರು ಆಗಮಿಸಲಿದ್ದಾರೆ.   ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ಜು.೧೧ ರಂದು ಬೆಳಿಗ್ಗೆ ೮.೩೦ ಗಂಟೆಗೆ ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಿಂದ ಬಸ್ ನಿಲ್ದಾಣದವರೆಗೆ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಜು.೧೧ ರಂದು ವಿಶ್ವ ಜನಸಂಖ್ಯಾ ದಿನಾಚರಣೆ


  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಸರ್ವೋದಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು.೧೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯದಡಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮ ಜರುಗಲಿದೆ.
 ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸಲಿದ್ದಾರೆ. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.  ಮುಖ್ಯ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಜಿ.ಪಂ. ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶಪ್ಪ ಕಂತೆಪ್ಪ ಕುಳಗಿ, ತಾ.ಪಂ. ಅಧ್ಯಕ್ಷ ದೇವಣ್ಣ ಭರಮಪ್ಪ ಮೇಕಾಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕಡಪಟ್ಟಿ, ರೋಟರಿ ಕ್ಲಬ್‌ನ ಮಾಜಿ ಗವರ್ನರ್ ಕೆ.ಜಿ.ಕುಲಕರ್ಣಿ ಅವರು ಆಗಮಿಸಲಿದ್ದಾರೆ.   ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ಜು.೧೧ ರಂದು ಬೆಳಿಗ್ಗೆ ೮.೩೦ ಗಂಟೆಗೆ ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಿಂದ ಬಸ್ ನಿಲ್ದಾಣದವರೆಗೆ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಅಂಜುಮನ್ ಸಂಸ್ಥೆಯಿಂದ ಶಾಸಕರಿಗೆ ಮತ್ತು ನಗರಸಭೆ ಸದಸ್ಯರಿಗೆ ಸನ್ಮಾನ


  ಕೊಪ್ಪಳ ೦೮ : ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಅಂಜುಮನ್ ಸಂಸ್ಥೆಯ ಆವರಣರದಲ್ಲಿ ದಿನಾಂಕ : ೦೭-೦೭-೨೦೧೩ ಬೆಳಿಗ್ಗೆ ೧೦ಗಂಟೆಗೆ ಕೊಪ್ಪಳ ಕ್ಷೇತ್ರದ ಶಾಸಕರಾದ  ಕೆ.ರಾಘವೇಂದ್ರ ಹಿಟ್ನಾಳ ಮತ್ತು ನಗರಸಭೆ ಹಾಲಿ ಸದಸ್ಯರಾದ ಅಮ್ಜದ್ ಪಟೇಲ್, ಮೌಲು ಜಮೇದಾರ, ಖಾಜಾವಲಿ ಬನ್ನಿಕೊಪ್ಪ, ವಾಹಿದ ಸೋಮಪುರರವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕ ಭಾಷಣವನ್ನು ಸಂಸ್ಥೆಯ ಅಧ್ಯಕ್ಷರಾದ ಎಂ.ಪಾಷಾ ಕಾಟನ್ ಮಾಡಿದರು ಹಾಗೂ ಸ್ವಾಗತ ಭಾಷಣವನ್ನು ಚಿಕನ್ ಪಿರಾ ಮಾಡಿದರು.



 ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಗಫಾರ ಡಿಡ್ಡಿ, ಸದಸ್ಯರಾದ ಮಾನ್ವಿ ಪಾಷಾ, ಇಬ್ರಾಹಿಮ್ ಅಡ್ಡೆವಾಲೆ, ಅಕ್ಬರ್ ಪಲ್ಟನ್, ಚಿಲಾನ ಮೈಲೈಕ್, ಆಸೀಫ್ ಕರ್ಕಿಹಳ್ಳಿ, ಅಜೀಜ್ ಪಲ್ಟನ್, ರಫೀ ಧಾರವಾಡ, ಹಬಿಬ ಪಾಷಾ, ಕಬೀರ್ ಸಿಂದೋಗಿ, ಸಿರಾಜ್ ಮನಿಯಾರ್, ಜಾಫರ್ ತಟ್ಟಿ, ಪಾಷಾ ತಳಕಲ್, ರುಸ್ತುಮ್, ಜಾವಿದ್, ಮುನಿರ್ ಸದ್ದಿಖಿ, ಇಜಾರತ್, ಆದೀಲ್ ಮನಿಯಾರ, ಮೆಹಬೂಬ ಇಟ್ಟಂಗಿ, ತಳಕಲ್ ಮೌಲಾ, ಅಶ್ಫಾಕ್ ಭವಾನಿ, ಜಾವಿದ್ ಮಾಸ್ಟರ್, ಗುರುರಾಜ, ಶಿವು ಕುಮಾರ ಶೇಟ್ರು, ವಲಿಅಹ್ಮದ್ ಅಬೂಬಕರ್, ಅಜ್ಜಪ್ಪ, ಶಿವಾನಂದ ಹೊದ್ಲೂರ ಸೇರಿದಂತೆ ವಂದನಾರ್ಪಣೆಯನ್ನು ಮುಸ್ತಫಾ ಕುದರಿ ಮೊತಿ ನೆರೆವೆರಿಸಿದರು.

ಮಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ಯಶಸ್ವಿ


ಕೊಪ್ಪಳ, ಜು. ೦೮ : ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮಲ್ಲಿ  ಪಂ. ಪುಟ್ಟರಾಜ ಗ್ರಾಮೀಣಾಭಿವೃದ್ಧಿ ವಿದ್ಯೆವರ್ಧಕ ಹಾಗೂ ವಿವಿಭೋದ್ದೇಶಗಳ ಚಾರಿಟೆಬಲ್ ಟ್ರಸ್ಟ(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಆಶ್ರಯದಲ್ಲಿ ಸಂತ ಶಿಶುನಾಳ ಶರೀಫರ ಜಯಂತಿ ಅಂಗವಾಗಿ ಜು.೦೪ರಂದು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫರ ಕುರಿತು ಪ್ರವಚನ ಮಾಡಿದರು. ಪಾಚಸಾಬ ನಧಾಫ್ ಓಜಿನಹಳ್ಳಿ ಶ್ರೀಮತಿ ಸುಜಾತಾ ಓಜಿನಹಳ್ಳಿ ಸಂಗೀತ ಕಾರ್ಯಕ್ರಮ ನೀಡಿದರು ರಾಜೇಂದ್ರ ಚಿನ್ನೂರ ತಬಲಾಸಾಥ್, ಹಾರ್ಮೊನಿಯಂ ನಿಂಗಪ್ಪ ಮೆತಗಲ್ಲ  ನೀಡಿದರು. ಶಾಂತಾ ಗುಡಿಸಲಮನಿ ಗ್ರಾ.ಪಂ ಅಧ್ಯಕ್ಷರು ಅಧ್ಯಕ್ಷತೆ ವಹಿಸದ್ದರು. ಅಶೋಕ ತೋಟದ, ಜಿ.ಪಂ. ಸದಸ್ಯರು ಉದ್ಘಾಟಿಸಿದರು. ಕೊಟ್ರಪ್ಪ ಮುತ್ತಾಳ ಹಿರಿಯ ಪತ್ರಕರ್ತರು ಪ್ರಾಸ್ತಾವಿಕವಾಗಿ ಮಾತನಾಡಿದರು ಅತಿಥಿಗಳಾಗಿ ಸುಮಾ ಕೊಟ್ರೇಶ್ ಬಂಡ್ರೆಕಲ್ಲ ಆರೋಗ್ಯ ಇಲಾಖೆ ಸುಮಂಗಳಾ ಉಪ್ಪಾರ ತಾ.ಪಂ. ಸದಸ್ಯರು ಶರಣಪ್ಪ ಉಮಚಿಗಿ ಶಿಕ್ಷಕರು ಇನ್ನೂ ಅನೇಕರು ಈ ಕಾರ್ಯಕ್ರಮಕ್ಕೆ ಗ್ರಾಮದ ಸಂಗೀತ ಬಳಗ ಶಿಕ್ಷಕರ ಬಳಗ ಗೆಳೆಯರ ಬಳಗ ಜನಪ್ರತಿ ನಿಧಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮದ ಸಮಸ್ತ ನಾಗರಿಕರು ಭಾಗವಹಿಸಿದ್ದರು.

image
















Sunday, July 7, 2013

ಭಾಗ್ಯನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ ಸಮಾರೋಪ






ವಿದ್ಯಾನಗರದಲ್ಲಿ  ಸಸಿ ನೆಡುವಿಕೆ
ಕೊಪ್ಪಳ: ವನಮೋತ್ಸವದ ಅಂಗವಾಗಿ ವಿದ್ಯಾನಗರದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಪ್ರಮುಖರಾದ ರಾಜಶೇಖರ ಅಂಗಡಿ, ಡಾ.ದೇವಯ್ಯ, ಮಲ್ಲಿಕಾರ್ಜುನ ಚೌಕಿಮಠ,ನಗರಸಭಾಸದಸ್ಯರಾದ ಸುವರ್ಣ ಬಸವರಾಜ ನೀರಲಗಿ, ಶಿವಾನಂದ ಹೊದ್ಲೂರ,ರಾಧಾ ಕುಲಕರ್ಣಿ, ಶಂಕರ ಸಿಂಗ್ರಿ ಗುರುಹಿರಿಯರು ಉಪಸ್ಥಿತರಿದ್ದರು.

koppal kdp meeting



Saturday, July 6, 2013

ಕನ್ನಡ ಸಾಹಿತ್ಯ ಪರಿಷತ್ತು ಪರೀಕ್ಷೆಗೆ ಅರ್ಜಿ ಆಹ್ವಾನ

  ಕನ್ನಡ ಸಾಹಿತ್ಯ ಪರಿಷತ್ತು ೨೦೧೩-೧೪ ನೇ ಸಾಲಿನ ಸಾಹಿತ್ಯ ಪರೀಕ್ಷೆಗಳನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸಂಯೋಜಿಸುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
      ಕಸಾಪ ದಿಂದ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಮೂನೆ ಮತ್ತು ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳಿಗಾಗಿ ನೇರವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮ ಇವರನ್ನು ಸಂಪರ್ಕಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನವಾಗಿದೆ. ರೂ.೩೦ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ ೧೫ ರವರೆಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷಾರ್ಥಿಗಳು ಸಾಹಿತ್ಯ ಪರೀಕ್ಷೆಗಳ ಅರ್ಜಿಗಾಗಿ ರೂ.೧೫/- ನ್ನು ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮ ಇವರಿಗೆ ಮನಿಯಾರ್ಡರ್ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೦-೨೬೬೨೩೫೮೪ ಗೆ ಸಂಪರ್ಕಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು  ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

 ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ದಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವಜನರಿಗೆ ಹಾಗೂ ಯುವಕ/ಯುವತಿ ಸಂಘಗಳಿಗೆ ೨೦೧೨-೧೩ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
೨೦೧೨ ರ ಏಪ್ರಿಲ್ ೦೧ ರಿಂದ ೨೦೧೩ ರ ಮಾರ್ಚ್ ೩೧ ರ ಅವಧಿಯಲ್ಲಿ ಯುವಕ/ಯವತಿ ಮಂಡಳಿ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪ್ರಶಸ್ತಿಗಾಗಿ ಪರಿಗಣಿಸಲಾಗುವುದು. ಯುವಕ-ಯುವತಿಯರು ೧೫ ರಿಂದ ೩೫ ವಯೋಮಿತಿಯವರಾಗಿರಬೇಕು, ೨೦೧೩ ರ ಮಾರ್ಚ್ ೩೧ಕ್ಕೆ ೩೫ ವರ್ಷ ಮೀರಬಾರದು, ವಯೋಮಿತಿ ಬಗ್ಗೆ ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿ ಸಲ್ಲಿಸಬೇಕು ಹಾಗೂ ಯಾವುದೇ ಕ್ರೀಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿಗಳನ್ನು  ಸಲ್ಲಿಸಬೇಕು.  ೨೦೧೨ ರ ಏಪ್ರಿಲ್ ೦೧ ರಿಂದ ೨೦೧೩ ರ ಮಾರ್ಚ್ ೩೧ ರ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಅನುಸಾರ ಪತ್ರಿಕಾ ವರದಿ, ಛಾಯಾಚಿತ್ರ, ಬ್ಯಾನರಗಳು ಸ್ಪಷ್ಟವಾಗಿ ಕಾಣುವಂತೆ ಒದಗಿಸುವುದು, ಈ ಎಲ್ಲಾ ಸ್ಪಷ್ಟವಾದ  ವಿವರಗಳನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಈ ಕಛೇರಿಯಲ್ಲಿ ನಿಗದಿತ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಾಧನೆಗಳ ದಾಖಲೆಗಳನ್ನು ಲಗತ್ತಿಸಿ ಜು.೨೫ ರೊಳಗಾಗಿ ೩ ಪ್ರತಿಗಳೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ.

ಯಾಜ್ಞವಲ್ಕ್ಯ ವೇದ ಗುರುಕುಲ : ಪ್ರವೇಶ ಪ್ರಾರಂಭ


ಕೊಪ್ಪಳ, ೫- ಶ್ರೀ ಯಾಜ್ಞವಲ್ಕ್ಯ ವೇದ ಗುರುಕುಲದಲ್ಲಿ ವೇದ ಹಾಗೂ ಕರ್ಮಕಾಂಡದ ವಿಷಯಗಳ ಕುರಿತು ಅಧ್ಯಯನಕ್ಕೆ ಪ್ರವೇಶ ಪ್ರಾರಂಭವಾಗಿವೆ.
ಈ ಕುರಿತು ಪ್ರಕಟಣೆ ನೀಡಿರುವ ಗುರುಕುಲ ಶ್ರೀ ಯಾಜ್ಞವಲ್ಕ್ಯ ವೇದ ಗುರುಕುಲವು ಹಲವಾರು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ವೇದ ಹಾಗೂ ಕರ್ಮಕಾಂಡದ ವಿಷಯಗಳ ಅಧ್ಯಯನವನ್ನು ಮಾಡುವ ೬ ರಿಂದ ೧೫ ವರ್ಷದೊಳಗಿನ ವಿದ್ಯಾರ್ಥಿಗಳು ಗುರುಕುಲ ನಿಯಮಗಳಿಗೆ ಒಳಪಟ್ಟು ಶುಕ್ಲ-ಯಜುರ್ವೇದ ಮೂಲ ಹಾಗೂ ಕರ್ಮಕಾಂಡ (ಪೌರೋಹಿತ್ಯ)ದ ೭ ವರ್ಷಗಳ ಪರ್ಯಂತ ವಿದ್ಯಭ್ಯಾಸಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟ ಉಪಹಾರ ಹಾಗೂ ವಸತಿ ಸೌಕರ್ಯವಿರುತ್ತದೆ. ಆಸ್ತಕರು ವೇ. ಕೊಪ್ರೇಶಾಚಾರ್ಯ ಅಗ್ನಿಹೋತ್ರಿ ಸಂಸ್ಥಾಪಕರು. ಸಂಚಾಲಕರು ಹಾಗೂ ಪ್ರಾಚಾರ್ಯರು ಶ್ರೀ ಯಾಜ್ಞವಲ್ಕ್ಯವೇದ ಗುರುಕುಲ ಪ್ಲಾಟ್ ನಂ. ೭. ೩ನೇ ಕ್ರಾಸ್ ಪ್ರಗತಿ ನಗರ, ಕಿನ್ನಾಳ ರಸ್ತೆ ಕೊಪ್ಪಳ. ದೂರವಾಣಿ ೯೪೪೮೪೨೭೬೬೪ ಗೆ ಸಂಪರ್ಕಿಸುವಂತೆ  ತಿಳಿಸಿದ್ದಾರೆ.

ವನಮಹೋತ್ಸವದ ಯಶಸ್ವಿ ೪ ನೇ ದಿನದ ಕಾರ್ಯಕ್ರಮ


ಕೊಪ್ಪಳ : ವನಮಹೋತ್ಸವ ಕಾರ್ಯಕ್ರಮದದಲ್ಲಿಂದು ಬಸವ ಮಂಟಪ, ಕಲ್ಯಾಣ ನಗರ, ಪ್ರಗತಿ ಕಾಲನಿ, ಪೋಲೀಸ್ ಕಾಲನಿ ಮತ್ತು ಟೀಚರ್‍ಸ್ ಕಾಲನಿಗಳಲ್ಲಿ ಒಟ್ಟು ೬ ಟ್ರ್ಯಾಕ್ಟರ್ ಸಸಿಗಳನ್ನು ವಿತರಿಸಲಾಯಿತು.  ಶ್ರೀಗವಿಮಠ , ವನಶ್ರೀಟ್ರಸ್ಟ, ಜಿಲ್ಲಾಡಳಿತ, ಅರಣ್ಯ ಇಲಾಖೆ, ನಗರಸಭೆ, ಹಾಗೂ ಪರಿಸರ ಪ್ರಿಯ ಸಂಘಟಣೆಗಳ ಅಡಿಯಲ್ಲಿ ಜರುಗುತ್ತಿರುವ ಈ ಕಾರ್ಯಕ್ರಮ ಇಂದು ೪ ನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.  ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಸಿ ವಿತರಣೆ ಮಾಡಲಾಯಿತು. ಪ್ರತಿಯೊಬ್ಬರೂ ಪೂಜ್ಯ ಶ್ರೀಗಳ ಪಾದಕ್ಕೆ ವಂದಿಸುತ್ತಾ ಧನ್ಯತಾಭಾವದಿಂದ ಸಸಿಗಳನ್ನು ಪಡೆದುಕೊಂಡು ಸ್ವಯಂ ನೆಡುವಲ್ಲಿ ನಿರತರಾದರು. ಶ್ರೀಗಳ ಜೊತೆಗೆ ನಗರಸಭಾ ಸದಸ್ಯ ಪ್ರಾಣೇಶ ಮಾದಿನೂರು, ಬಸವರಾಜ್ ಪುರದ, ರಾಜು ಶೆಟ್ಟರ್, ವಸ್ತ್ರದ್ ಸಹೋದರರು ಹಾಗೂ ಆಯಾ ವಾರ್ಡುಗಳ ಪ್ರಮುಖರು ಭಾಗಿಯಾಗಿದ್ದರು. ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಿ ಪೂಜ್ಯ ಶ್ರೀಗಳ ಆಶಿರ್ವಾದ ಪಡೆದು, ಸಸಿ ನೆಡುವುದರ ಮೂಲಕ ಸಹಕಾರ ನೀಡಿದರು. 

ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಪ್ರತಿ ವಾರ್ಡಗಳಲ್ಲೂ ಪೂಜ್ಯ ಶ್ರೀಗಳ ಜೊತೆ ಪುರ ಪ್ರಮುಖರು, ರಾಜಕೀಯ ಧುರೀಣರು ಜೊತೆಗೂಡಿ ಸಹಕರಿಸುತ್ತಿದ್ದರು. ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶ್ರೀಗವಿಸಿದ್ಧಶ್ವರ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ / ಎನ್.ಸಿ.ಸಿ ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದ್ದ

Welcome to News koppal

News Koppal providing news and  information of koppal district politics,information, entertainment Sports and many more

kannadanet.com
kannadanet.blogspot.com
providing daily news of district